
12th February 2025
ಜಮಖಂಡಿ: ಕ್ಷೇತ್ರದ ಗ್ರಾಮೀಣ ರಸ್ತೆಗಳ ಸುಧಾರಣೆ, ನಗರ ಪ್ರದೇಶದಲ್ಲಿನ ಒಳಚರಂಡಿ, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಾಗಿ ಸಂಬಂದಪಟ್ಟ ಇಲಾಖೆಯ ಸಚಿವರೊಂದಿ ಚರ್ಚಿಸಿ ಅಂದಾಜು 25ಕೋಟಿಗೂ ಅಧಿಕ ವೆಚ್ಚದ ಅನುದಾನ ವಿವಿಧ ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಸಜ್ಜಿ ಹನುಮಾನ ದೇವಸ್ಥಾನದ ಹತ್ತಿರ ಲೋಕೋಪಯೋಗಿ ಇಲಾಖೆಯ 2024-25ನೇ ಸಾಲಿನ ಎಸ್.ಎಚ್.ಡಿ.ಪಿ5ರ ಒಂದನೇ ಹಂತದ ಕಾಮಗಾರಿ ನಗರದ ಎಸ್.ಆರ್.ಎ ಕ್ಲಬ್ ದಿಂದ ಚನ್ನಮ್ಮ ವೃತ್ತದವರೆಗೆ ಅಂದಾಜು 824ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುಮುಖ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮುತವರ್ಜಿವಹಿಸಿ ಸರಕಾರದ ಮಟ್ಟದಲ್ಲಿ ಮಾತನಾಡಿ ಹಲವು ಕಾಮಗಾರಿಗಳಿಗೆ ಅನುಮೋದನೆ ಪಡೆಯಲಾಗಿದೆ. ಮುಂಬರುವ ದಿನಗಳಲ್ಲಿ ಹಲವಾರು ಕಾಮಗಾರಿಗಳ ಯೋಜನೆ ರೂಪಿಸಲಾಗಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರಲಾಗುವದು ಎಂದರು.
ಅಭಿವೃದ್ಧಿ ಕಾಮಗಾರಿಗಳು ಪುರ್ಣಗೊಳ್ಳಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಮುಲ್ಯವಾಗಿದೆ. ಈ ರಸ್ತೆ ಕಾಮಗಾರಿಯು ತ್ವರಿತ ಗತಿಯಲ್ಲಿ ನಡೆಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವದು ಎಂದರು.
ಕಡಿಮೆ ಅವಧಿಯಲ್ಲಿ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಬೇಕು ಎಮದು ಗುತ್ತಿಗೆದಾರ ಎಮ್.ಎಲ್. ಲಮಾಣಿ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಬೆ ಅಧ್ಯಕ್ಷ ಪರಮಾನಂದ ಗವರೋಜಿ, ಪಿಡಬ್ಲೂಡಿ ಎಇಇ ಎಸ್.ಆರ್. ಬಂಡಿವಡ್ಡರ, ನಗರಸಭೆ ಪೌರಾಯುಕ್ತ ಜ್ಯೋತಿಗಿರೀಶ, ಹೆಸ್ಕಾಂ ಎಇಇ ವಿಶಾಲ ಧರೆಪ್ಪಗೋಳ, ಜಿಎಲ್ಬಿಸಿ ಎಇಇ ನಾಯ್ಕ, ನಾಗಪ್ಪ ಸನದಿ, ಮಲ್ಲು ದಾನಗೌಡ, ಎಂ.ಬಿ. ನ್ಯಾಮಗೌಡ, ಈಶ್ವರ ಆದೆಪ್ಪನವರ, ಶಂಕರ ಕಾಳೆ, ಸುರೇಶಗೌಡ ಪಾಟೀಲ, ರಾಜುಗೌಡ ಪಾಟೀಲ, ಧರೆಪ್ಪ ಗುಗ್ಗರಿ, ಅರವಿಂದಗೌಡ ಪಾಟೀಲ, ಸಂಗು ದಳವಾಯಿ, ವಿಠ್ಠಲ ಹಾಲಗೊಂಡ, ರಮೇಶ ಆಲಬಾಳ, ಶ್ರೀಧರ ಕಂಬಿ ಇತರರು ಇದ್ದರು.
undefined